ಬೆಳಗಾವಿ : ಡಾ!! ಬಾಬಾಸಾಹೇಬರ ಅಂಬೇಡ್ಕರರ 134 ನೇಯ ಜಯಂತಿಯ ನಿಮಿತ್ಯವಾಗಿ ಕರ್ನಾಟಕ ಭೀಮ ರಕ್ಷಕ ಸಂಘಟನೆ ವತಿಯಿಂದ ಸಂಕಲ್ಪ ಏಜ್ಯುಕೇಶನ ಮತ್ತು ರೋರಲ ಡವಲಪಮೆಂಟ ಸೊಸೈಟಿ ವೃದ್ಧಾಶ್ರಮ ಹಾಗು ಆಶ್ರಯ ಸದಾರ ಮಹಿಳಾ ವಸತಿ ಗೃಹ ಹಾಗು ಶ್ರೀ ದೊದನಾನಾ ವಿಕಾಸ ಶಿಕ್ಷಣ ಸಂಸ್ಥೆ ಬುಧ್ಧಿ ಮಾಂಧ್ಯ ಮಕ್ಕಳ ವಸತಿ ಯುತ ವಿಶೇಷಶಾಲೆ ಹಿಡಕಲಾ ಡ್ಯಾಂ ಇವರಿಗೆ ಸೌಲಭ್ಯಗಳ ವಿತರಣಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಭೀಮ ರಕ್ಷಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಈಶ್ವರ ಮಾರುತಿ ಗುಡಜ ರವರು ಸಂಘಟನೆಯ ದಿಂದ ಒಳ್ಳೆಯ ಉದ್ದೇಶ ಇದ್ದರೆ ಹಂತವರಿಗೆ ಸಂಘಟನೆ ಬೆಂಬಲವಾಗಿ ನಿಲ್ಲವುದು ಅನ್ಯಾಯಕ್ಕೊಳಗಾದ ಜನರಿಗೆ ನ್ಯಾಯ ಕೊಡಿಸುವುದು, ನ್ಯಾಯನೀತಿ ಧರ್ಮವನ್ನು ಕಾಪಾಡುವುದು ಸಂಘಟನೆಯ ಮುಖ್ಯ ಉದ್ದೇಶ ಅನ್ಯಾಯದ ವಿರುದ್ಧ ಸಿಡಿದೆಳುವುದೇ ನಮ್ಮ ಸಂಘಟನೆಯ ಮುಖ್ಯ ಧ್ಯೇಯವಾಗಿದೆ ಎಂದು ಹೇಳಿದರು.
ಡಾ. ಅಂಬೇಡ್ಕರ್ ಎಲ್ಲರಿಗೂ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯ ದೊರಕಿಸಲು ಶ್ರಮಿಸಿದವರು. ಅಂತಹ ಮಹಾತ್ಮರ ಸ್ಮರಣೆ ಮಾಡುವುದು ಇಂದು ನಮಗೆಲ್ಲರಿಗೂ ಸಂಭ್ರಮದ ವಿಚಾರವೆ. ಭಾರತದ ಕಾನೂನು ಸುವ್ಯವಸ್ಥೆ, ಅಸ್ಪೃಶ್ಯತೆ ನಿವಾರಣೆ, ಪ್ರಜೆಗಳ ಮೂಲಭೂತ ಕರ್ತವ್ಯ, ಸಮಾನತೆ, ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆ ಇಂದಿಗೂ ಸ್ಮರಣೀಯವಾಗಿವೆ ಎಂದರು.
ಗೌರವ ಅಧ್ಯಕ್ಷರಾದ ಮಾಹಾನಿಂಗ ಶಿರಗುಪ್ಪಿ ಮಾತನಾಡಿ ನಾನು ಕಳೆದ 20 ವರ್ಷ ಗಳಿಂದ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ ನಾಲ್ಕು ಬಾರಿ ಸದಸ್ಯನಾಗಿ ಜನರ ಸೇವೆ ಮಾಡಿದ್ದೇನೆ ಆದ್ದರಿಂದ ಸಂಘಟನೆ ಒಂದು ಒಳ್ಳೆಯ ರೀತಿಯಲ್ಲಿ ಬೆಳೆಯಲಿ ಯುವಕರಿಗೆ ಹೆಚ್ಚಿನ ಪ್ರೋತ್ಸಾಹ ಮಾಡೋಣ ವಿದ್ಯಾಭ್ಯಾಸಕ್ಕೆ ಬಡ ಜನರಿಗೆ ನಮ್ಮಿಂದ ಸಾದ್ಯವಾದಶ್ಟು ಸಹಾಯ ಮಾಡೋಣ ಎಂದು ಸಲಹೆ ನೀಡಿದರು ನಾವು ಸಂಘಟನೆ ಯಿಂದ ಹೆಚ್ಚಾಗಿ ಶಿಕ್ಷಣಕ್ಕೆ ಒತ್ತು ನಿಡೋನಾ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಭೀಮ ರಕ್ಷಕ ಸಂಘಟನೆ ರಾಜ್ಯಾಧ್ಯಕ್ಷರು ಈಶ್ವರ ಗುಡಜ ಮಾಹಾನಿಂಗ ಶಿರಗುಪ್ಪಿ .ಗ್ರಾಮ ಪಂಚಾಯತ ಸದಸ್ಯರು ಮನಗುತ್ತಿ. ಅಶೋಕ ಕುಮಾರನಾಯಕ ಕೋಣ್ಣೂರ ಪುರ ಸಭೆ ಸದಸ್ಯರು ಮುದಲಿಂಗ ಗೋರಬಾಳ ಕರ್ನಾಟಕ ಭೀಮ ರಕ್ಷಕ ಸಂಘಟನೆಯ ಪ್ರಮುಖರು. ನಾಗಪ್ಪ ಹರಿಜನ.ಮುತ್ತುಸ್ವಾಮಿ.ಸಂತು.ಕಿರಣ.ಕರಣ.ರೋಹಿತ.ಅಬಜಲ ಹಾಗೂ ಕಾರ್ಯಕರ್ತರು ಹಾಜರಿದ್ದರು.
ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ಒಂದೇ ಜಾತಿಗೆ ಸೀಮಿತ ಅಲ್ಲ : ಕರ್ನಾಟಕ ಭೀಮರಕ್ಷಕ ಸಂಘಟನೆ ರಾಜ್ಯಾಧ್ಯಕ್ಷರಾದ ಈಶ್ವರ ಗುಡಜ ಹೇಳಿಕೆ…!
