Home / ರಾಜ್ಯ / ಶಾಸಕ ಎನ್.ವೈ ಗೋಪಾಲಕೃಷ್ಣ ರವರಿಂದ ಅಭಿವೃದ್ಧಿ ಪಥದತ್ತ ರಂಗಯ್ಯನದುರ್ಗ ಜಲಾಶಯ

ಶಾಸಕ ಎನ್.ವೈ ಗೋಪಾಲಕೃಷ್ಣ ರವರಿಂದ ಅಭಿವೃದ್ಧಿ ಪಥದತ್ತ ರಂಗಯ್ಯನದುರ್ಗ ಜಲಾಶಯ

ಶಾಸಕ ಎನ್.ವೈ ಗೋಪಾಲಕೃಷ್ಣ ರವರಿಂದ ಅಭಿವೃದ್ಧಿ ಪಥದತ್ತ ರಂಗಯ್ಯನದುರ್ಗ ಜಲಾಶಯ

ಚಿತ್ರದುರ್ಗ : ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಂಗಯ್ಯನದುರ್ಗ ಜಲಾಶಯ ದಶಕಗಳಿಂದ ಅಭಿವೃದ್ಧಿ ಕಾಣದೆ ಮಂಕಾಗಿತ್ತು ಜಲಾಶಯದ ಮೇಲಿನ ಡಾಂಬರ್ ರಸ್ತೆ. ದುರಸ್ತಿ ಕಾಣದ ಗೇಟ್ ರಬ್ಬರ್ ಸೀಲ್, ಗೇಟ್ ತೂಬುಗಳು ಎಡಬಲ ದಂಡೆ ನಾಲುವೆಗಳು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ವೈ ಗೋಪಾಲಕೃಷ್ಣ ರವರ ದೂರ ದೃಷ್ಟಿಯಿಂದ ಸದ್ದಿಲ್ಲದೆ ಭರದಿಂದ ಸಾಗಿದ ಜಲಾಶಯದ ಅಭಿವೃದ್ಧಿ ಕಾಮಗಾರಿಗಳು ಜಲಾಶಯದ ಭದ್ರತೆ ಜೊತೆಗೆ ಪ್ರೇಕ್ಷಣಿಕ ಸ್ಥಳವನ್ನಾಗಿ ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಸೆಳೆಯಲು ನಾನಕಸರತ್ತು ಮುಖ್ಯ ರಸ್ತೆಯಿಂದ ಜಲಾಶಯಕ್ಕೆ ಸಾಗುವ ಮಾರ್ಗಕ್ಕೆ ಸ್ವಾಗತ ಕಮಾನು ಹಾಗೂ ನಾಮಫಲಕ ನಿರ್ಮಾಣ ಜಲಾಶಯದ ಏರಿ ಮೇಲೆ ಡಾಂಬರ ರಸ್ತೆ ಹಾಳಾಗಿದ್ದ ಜಲಾಶಯದ ಎರಡು ತೂಬುಗಳ ದುರಸ್ತಿ ಕಾರ್ಯ.
ಜಲಾಶಯದ ಬಲದಂಡೆ ಕಾಲುವೆ ನಿರ್ಮಾಣದ ಆಧುನಿಕರಣ.

ಜಲಾಶಯದ ಏರಿ ಮೇಲೆ ಪ್ರವಾಸಿಗರ ವಾಹನ ನಿಲುಗಡೆಗೆ ವಿಶಾಲ ಪಾರ್ಕಿಂಗ್ ವ್ಯವಸ್ಥೆ.

ಜಲಾಶಯದ ಏರಿ ಮೇಲೆ ಜಲಾಶಯ ವೀಕ್ಷಕರಿಗೆ ರಕ್ಷಣಾತ್ಮಕ ಕಬ್ಬಿಣದ ಚೈನ್ ಲಿಂಕ್ ಗ್ಯಾಲರಿ ಹಾಗೂ ಕಾಂಕ್ರೀಟ್ ಆಸನಗಳ ವ್ಯವಸ್ಥೆ.

ಜಲಾಶಯವನ್ನು ಪ್ರೇಕ್ಷಣಿಕ ಸ್ಥಳವನ್ನಾಗಿಸಲು ಪ್ರಗತಿಯಲ್ಲಿರುವ ನಾನು ಅಭಿವೃದ್ಧಿ ಯೋಜನೆಗಳು.

ಶಾಸಕರ ಯೋಜನೆಗಳಿಗೆ ಸಾತ್ ನೀಡುತ್ತಿರುವ ಜಿಲ್ಲಾ ಸಣ್ಣ ನೀರಾವರಿ ಇಲಾಖೆ ಮೊಳಕಾಲ್ಮೂರು ತಾಲೂಕಿಗೆ ಇರುವ ಏಕೈಕ ಜಲಾಶಯ ಅದು ರಂಗಯ್ಯನದುರ್ಗ ಜಲಾಶಯ.. ದಶಕದಿಂದ ಅಭಿವೃದ್ಧಿ ಕಾಣದೆ ಹಲವಾರು ಸಮಸ್ಯೆಗಳಿಂದ ಒಂದಲ್ಲ ಒಂದು ಸುದ್ದಿಯಲ್ಲಿದೆ..

ಈ ಬಾರಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್ ವೈ ಗೋಪಾಲಕೃಷ್ಣರವರು ಕುಡಿಯುವ ನೀರು ..ನೀರಾವರಿ ಹಾಗೂ ಪ್ರೇಕ್ಷಣಿಕ ಸ್ಥಳದ ದೂರ ದೃಷ್ಟಿ ಇಟ್ಟುಕೊಂಡು.. ಈ ಜಲಾಶಯದ ತಾಂತ್ರಿಕ ದೋಷಗಳ ದುರಸ್ತಿಗಳ ಜೊತೆಗೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ..

ದಶಕದಿಂದಲೂ ಡಾಂಬರು ಕಾಣದೆ ಕಿತ್ತು ಹೋಗಿದ್ದ ಜಲಾಶಯದ ಏರಿ ಮೇಲಿನ ರಸ್ತೆಯು ಡಾಂಬರಿಕರಣ ಗೊಳ್ಳುತ್ತಿದೆ.. ಜಲಾಶಯಕ್ಕೆ ಸಾಗುವ ದಾರಿಗೆ ಸ್ವಾಗತ ಕಮಾನ್ ಹಾಗೂ ನಾಮಫಲಕ ಅಳವಡಿಕೆ… ಜಲಾಶಯದಲ್ಲಿ ಸಂಗ್ರಹವಾದ ನೀರು ಪೋಲಾಗದಂತೆ ಜಲಾಶಯದ ಕ್ರಿಸ್ ಗೇಟುಗಳಿಗೆ ರಬ್ಬರ್ ಸೇಲ್ ಅಳವಡಿಕೆ.. ಜಲಾಶಯ ನೋಡಲು ಬಂದಂತಹ ಪ್ರವಾಸಿಗರಿಗೆ ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ.. ಜಲಾಶಯ ವೀಕ್ಷಿಸಲು ರಕ್ಷಣಾತ್ಮಕ ಕಬ್ಬಿಣ ಚೈನ್ ಲಿಂಕ್ ಗ್ಯಾಲರಿ ಹಾಗೂ ಕಾಂಕ್ರೀಟ್ ಆಸನಗಳ ವ್ಯವಸ್ಥೆ.. ಕುಡಿಯುವ ನೀರಿನ ಸರಬರಾಜು ಹಾಗೂ ನಾಲೆಗಳ ತೂಬೂಗಳ ದುರಸ್ತಿ ಕಾರ್ಯ.. ಜೊತೆಗೆ ಜಲಾಶಯವನ್ನು ಪ್ರೇಕ್ಷಣಿಕ ಸ್ಥಳವನ್ನಾಗಿಸಲು ನಾನ ಅಭಿವೃದ್ಧಿ ಯೋಜನೆಗಳು ಬರದಿಂದ ಸಾಗಿವೆ… ಶಾಸಕರ ಈ ಯೋಜನೆಗಳಿಗೆ ಜಿಲ್ಲಾ ಸಣ್ಣ ನೀರಾವರಿ ಇಲಾಖೆ ಸಾತ್ ನೀಡುತ್ತಿದೆ.

ಶಾಸಕರ ಈ ಕಾರ್ಯಕ್ಕೆ ಪ್ರವಾಸಿಗರು, ಸಾರ್ವಜನಿಕ, ಹಾಗೂ ನೆಟ್ಟಿಗರ ವಲಯದಲ್ಲಿ ಬಹಳ ಪ್ರಶಂಸೆ ವ್ಯಕ್ತವಾಗುತ್ತಿದೆ.

ವರದಿ : ಚಂದ್ರಪ್ರಕಾಶ್ ಮೊಳಕಾಲ್ಮೂರು

Leave a Reply

Your email address will not be published. Required fields are marked *