ಮೊಳಕಾಲ್ಮೂರು : ಪಟ್ಟಣದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಹಕರಿಸಿದ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ ಜಿ ಪ್ರಕಾಶ. ಮೊಳಕಾಲ್ಮೂರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣರವರು ಪುಷ್ಪಾರ್ಚನೆ ಮಾಡುವ ಮೂಲಕ ಪೂಜೆ ನೆರವೇರಿಸಿದರು
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ನಾಮ ನಿರ್ದೇಶಕ ಸದಸ್ಯ ಜಿ ಪ್ರಕಾಶ್ ಮಾತನಾಡ ವಿಶ್ವದ ಶ್ರೇಷ್ಠ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್.. ಇಂಥ ಮಹಾನ್ ವ್ಯಕ್ತಿಯ ದಿನಾಚರಣೆಯನ್ನು ಕ್ಷೇತ್ರದ ಶಾಸಕರ ಜೊತೆಗೋಡಿ ಆಚರಿಸುತ್ತಿರುವುದು ನಮ್ಮ ಜನಾಂಗಕ್ಕೆ ಸಂತಸ ತಂದಿದೆ..
ಮೊಳಕಾಲ್ಮೂರು ಪಟ್ಟಣದಲ್ಲಿ ಎಲ್ಲಾ ಜಾತಿ ಜನಾಂಗಗಳಿಗೆ ಶಿಕ್ಷಣದ ಜೊತೆಗೆ ಸಮಾನತೆಯನ್ನು ಪಾಲಿಸುತ್ತಿರುವ ಶಾಸಕರು.. ಇಂದು ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಎರಡು ಎಕರೆ ಜಾಗವನ್ನು ನೀಡಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಸಹಕರಿಸಿದ್ದು ನಮ್ಮ ಜನಾಂಗಕ್ಕೆ ಅವರು ನೀಡುತ್ತಿರುವ ಪ್ರಾತಿನಿಧ್ಯವನ್ನ ಗಮನಿಸಬಹುದಾಗಿದೆ.. ಇಂಥ ಸಂದರ್ಭದಲ್ಲಿ ಶಾಸಕರಿಗೆ ನಮ್ಮ ಜನಾಂಗದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಹಾಗೂ ಜಗಜೀವನ್ ರಾವ್ ರವರ ಭಾವಚಿತ್ರವಿರುವ ಬೆಳ್ಳಿ ರಥವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು….
ಈ ಸಂದರ್ಭದಲ್ಲಿ ಅಂಬೇಡ್ಕರ್ ಕಾಲೋನಿಯ ಮುಖಂಡರು ಯುವಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಎನ್ ವೈ ಗೋಪಾಲಕೃಷ್ಣ ರವರ ಅಭಿಮಾನಿಗಳು.. ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಚಂದ್ರಪ್ರಕಾಶ್ ಮೊಳಕಾಲ್ಮೂರು