Home / ಸಾಂಸ್ಕೃತಿಕ / ನಾಯಕನಹಟ್ಟಿಯಲ್ಲಿ ಅದ್ದೂರಿ ರಾಮನವಮಿ ಆಚರಣೆ

ನಾಯಕನಹಟ್ಟಿಯಲ್ಲಿ ಅದ್ದೂರಿ ರಾಮನವಮಿ ಆಚರಣೆ

ನಾಯಕನಹಟ್ಟಿಯಲ್ಲಿ ಅದ್ದೂರಿ ರಾಮನವಮಿ ಆಚರಣೆ

ನಾಯಕನಹಟ್ಟಿ : ಪಟ್ಟಣದ ಕೋಟೆ ಬಡಾವಣೆಯಲ್ಲಿ ಭಾನುವಾರ ಹನುಮಂತನ ದೇವಸ್ಥಾನದಲ್ಲಿ ರಾಮನವಮಿ ಹಬ್ಬ ಸಡಗರ ಸಂಭ್ರಮದಿಂದ ಆಚರಿಸಿದರು.

ಶ್ರೀ ಗುರು ತಿಪ್ಪೇ ರುದ್ರಸ್ವಾಮಿ ದೇವಸ್ಥಾನದ ವತಿಯಿಂದ
ರಾಮನವಮಿಗೆ ಆಗಮಿಸಿದ ಭಕ್ತಾದಿಗಳಿಗೆ. ಅನ್ನಸಂದರ್ಪಣೆ ಹಾಗೂ ಪಾನಕ ವ್ಯವಸ್ಥೆ. ಮಾಡಿದ್ದಾರೆ.

ರಾಮನವಮಿಗೆ ಆಗಮಿಸಿದ ಭಕ್ತಾದಿಗಳಿಗೆ ಅವರ ಇಷ್ಟಾರ್ಥಗಳನ್ನು. ನೆರವೇರಲಿ ಎಂದು ಮತ್ತು ಈ ಬಾರಿ ಉತ್ತಮ ಮಳೆ. ವ್ಯಾಪಾರ. ಉದ್ಯೋಗ. ವಿದ್ಯೆ.ಅಭಿವೃದ್ಧಿ ಆಗಲಿ. ಪುರೋಹಿತ. ಮುರಳಿ ಕೃಷ್ಣ ಹೇಳಿದರು.

ನಾಯಕನಹಟ್ಟಿ ಪಟ್ಟಣದಲ್ಲಿ ರಾಮನವಮಿ ಅಂಗವಾಗಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.

ಬಳಿಕ ಭಕ್ತಾದಿಗಳು ಪಾನಕ ವಿತರಿಸಿದರು ದೇವಸ್ಥಾನದ ಅರ್ಚಕ ಮುರಳಿ ಕೃಷ್ಣ ನೇತೃತ್ವದಲ್ಲಿ ನಡೆಯಿತು . ರಾಮನವಮಿ ಅಂಗವಾಗಿ ದೇವಾಲಯಕ್ಕೆ ಬಂದ ಭಕ್ತಾದಿಗಳು ರಾಮನ ದರ್ಶನ ಪಡೆದರು.

ರಾಮನವಮಿ ಅಂಗವಾಗಿ ಪಟ್ಟಣದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ 6 ಗಂಟೆಗೆ ಸ್ವಾಮಿಗೆ ಪಂಚಾಮೃತ ಅಭಿಷೇಕ ರುದ್ರ ಅಭಿಷೇಕ ಮಾಡಿದ ನಂತರ ಮಹಾಮಂಗಳಾರತಿ ನಡೆಯಿತು.
ರಾಮ ಆಂಜನೇಯ ವಿಗ್ರಾರಗಳನ್ನು ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ವಿವಿಧ ಹೂಗಳಿಂದ ಅಲಂಕಾರಮಾಡಲಾಗಿತ್ತು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಪುರೋಹಿತ ಮುರಳಿ ಕೃಷ್ಣ, ಅರ್ಚಕರಾದ ವೆಂಕಟೇಶ್, ದಳವಾಯಿ ತಾರ್ಕಿಶ್, ರುದ್ರಮುನಿ, ಜಿತೇಶ್, ದೇವಸ್ಥಾನ ಸಿಬ್ಬಂದಿ ಸತೀಶ್, ಗೋವಿಂದ, ಪ್ರಕಾಶ್, ಪಾಂಡುರಂಗ, ಹಾಗೂ ಇತರರು ಇದ್ದರು ಹಾಗೂ ಭಕ್ತಾದಿಗಳು ರಾಮನವಮಿ ತೇರು ಚಾಲನೆ ಮಾಡಿದರು.
ವರದಿ ಹರೀಶ ನಾಯಕನಹಟ್ಟಿ

Leave a Reply

Your email address will not be published. Required fields are marked *