Home / ಸಾಂಸ್ಕೃತಿಕ / ಮೈಲಹಳ್ಳಿಯ ಈಶ್ವರ ದೇವಸ್ಥಾನದ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಕೆ.ಎ.ಎಸ್ ಅಧಿಕಾರಿ ಎನ್. ರಘುಮೂರ್ತಿ ಭಾಗಿ

ಮೈಲಹಳ್ಳಿಯ ಈಶ್ವರ ದೇವಸ್ಥಾನದ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಕೆ.ಎ.ಎಸ್ ಅಧಿಕಾರಿ ಎನ್. ರಘುಮೂರ್ತಿ ಭಾಗಿ

ಮೈಲಹಳ್ಳಿಯ ಈಶ್ವರ ದೇವಸ್ಥಾನದ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಕೆ.ಎ.ಎಸ್ ಅಧಿಕಾರಿ ಎನ್. ರಘುಮೂರ್ತಿ ಭಾಗಿ

ನಾಯಕನಹಟ್ಟಿ : ಭಾರತದ ಸನಾತನ ಸಂಸ್ಕೃತಿ ಶ್ರೀಮಂತಗೊಳ್ಳಲು ನಮ್ಮ ಧಾರ್ಮಿಕ ಆಚರಣೆಗಳು ಮೂಲ ಕಾರಣವೆಂದು ಕೆ ಎ ಎಸ್ ಅಧಿಕಾರಿ ಏನ್ ರಘುಮೂರ್ತಿ ಹೇಳಿದರು
ಅವರು ಚಳ್ಳಕೆರೆ ತಾಲೂಕಿನ ಮೈಲಹಳ್ಳಿ ಗ್ರಾಮದಲ್ಲಿ ಈಶ್ವರ ದೇವಸ್ಥಾನದ ಪ್ರತಿಷ್ಠಾಪನೆ ಅಂಗವಾಗಿ ಏರ್ಪಡಿಸಿದಂತಹ ಧರ್ಮ ಸಂಸತ್ ಸಭೆಯಲ್ಲಿ ಮಾತನಾಡಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ತಾಂತ್ರಿಕತೆ ಮತ್ತು ವೈಜ್ಞಾನಿಕತೆ ಬೆಳೆದಿದ್ದರೂ ಕೂಡ ಶಾಂತಿ ನೆಲೆಸಿಲ್ಲ ಆದರೆ ಭಾರತದ ಆಧ್ಯಾತ್ಮಿಕತೆ ಮತ್ತು ಧಾರ್ಮಿಕ ಆಚರಣೆಗಳಿಂದ ಶಾಂತಿ ಮನೆ ಮಾಡಿದೆ ಶ್ರೀಗಳು ಹೇಳುವಂತೆ ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ಘೋಷವಾಕ್ಯ ಮನುಕುಲದ ಅನಂತದವರೆಗೆ ಸರ್ವಕಾಲಿಕವಾದ್ದು ಶರಣರು ಕಂಡಂತ ಕನಸನ್ನು ಚಳ್ಳಕೆರೆ ತಾಲೂಕಿನ ಜನ ಪರಿ ಪಾಲಿಸುತ್ತಿದ್ದಾರೆ ಇಲ್ಲಿ ಅನಕ್ಷರತೆ ಬಡತನ ಇದ್ದಾಗ್ಲೂ ಕೂಡ ಇದನ್ನು ಮೀರಿದ ಧರ್ಮ ಮತ್ತು ಭಕ್ತಿಯ ಜಾಗೃತಿ ಎ ಮ್ಮರವಾಗಿ ಬೆಳೆದಿದೆ ಇದಕ್ಕೆ ಮೂಲ ಕಾರಣ ಅನಪೇಕ್ಷಿತ ನಡವಳಿಕೆ ಮತ್ತು ಸತ್ಯ ಧರ್ಮದ ನಡೆ ಮೂಲ ಕಾರಣ ಇಂತಹ ಈ ಪ್ರದೇಶಗಳಲ್ಲಿ ಇನ್ನು ಹೆಚ್ಚು ಹೆಚ್ಚು ಧಾರ್ಮಿಕ ಕಾರ್ಯಕ್ರಮಗಳು ಮತ್ತು ದೈವರಾದನೆಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು
ಸಮಾರಂಭದಲ್ಲಿ ಉಪಸ್ಥಿತರಿದ್ದಂತ ಉಜ್ಜನಿ ಶ್ರೀಗಳು ಮಾತನಾಡಿ ಬಡತನವನ್ನು ಮೀರಿ ಇಲ್ಲಿನ ಜನ ಈಶ್ವರನ ಮತ್ತು ಭಕ್ತಿಯ ಆರಾಧನೆ ಮಾಡುತ್ತಾರೆ ಇಂತಹ ದೇವಸ್ಥಾನಗಳ ಕೈಂಕರ್ಯಗಳನ್ನು ಕೈಗೆತ್ತಿಕೊಳ್ಳುತ್ತಾರೆ ಚಿತ್ರದುರ್ಗದ ನಾಯಕ ಜನಾಂಗವು ಉಜ್ಜಯಿನಿ ಮಠಕ್ಕೆ ಅನಾದಿಕಾಲದಿಂದಲೂ ಕೂಡ ಸ ನ್ನಡತಿಯಿಂದ ನಡೆದುಕೊಳ್ಳುತ್ತಾರೆ ಇದಕ್ಕೆ ಪುರಾಣವೂ ಕೂಡ ಪೂರಕವಾಗಿದೆ ಭಕ್ತಿ ಭಾವನೆಗಳ ಜೊತೆ ಹೆಚ್ಚು ಹೆಚ್ಚುಕುಟುಂಬಗಳು ಉನ್ನತ ಶಿಕ್ಷಣ ಮತ್ತು ವೈ ಚಾರಿಕತೆ ಬೆಳೆಸಿಕೊಳ್ಳಲು ಇದರ ಮುಖಾಂತರ ಸಾಮಾಜಿಕ ಮತ್ತು ಆರ್ಥಿಕವಾಗಿ ದೃಢವಾಗಬೇಕೆಂದು ಆಶೀರ್ವಚನ ನೀಡಿದರು ಇದೇ ಸಂದರ್ಭದಲ್ಲಿ ಪರಮಪೂಜ್ಯ ಮುಷ್ಟೂರು ಶ್ರೀಗಳು ಪಂಚಾಯತಿ ಅಧ್ಯಕ್ಷರಾದ ಪಾಲಯ್ಯ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀಮತಿ ಶಾಂತ ಕಾಂಗ್ರೆಸ್ ಮುಖಂಡರಾದ ನಾಗಣ್ಣ ಬಿಜೆಪಿ ಮುಖಂಡರಾದ ಪ್ರಹ್ಲಾದ ಧನಂಜಯ ಮುಂತಾದವರು ಉಪಸ್ಥಿತರಿದ್ದರು

ವರದಿ :ಹರೀಶ ನಾಯಕನಹಟ್ಟಿ

Leave a Reply

Your email address will not be published. Required fields are marked *