Home / ರಾಜ್ಯ / ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆ ಒಂದೇ ತಿಂಗಳಿಗೆ ಮನೆ ಮನೆ ತಲುಪಿವೆ. ಡಿ ಸುಧಾಕರ ಹೆಳಿಕೆ..!

ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆ ಒಂದೇ ತಿಂಗಳಿಗೆ ಮನೆ ಮನೆ ತಲುಪಿವೆ. ಡಿ ಸುಧಾಕರ ಹೆಳಿಕೆ..!

ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆ ಒಂದೇ ತಿಂಗಳಿಗೆ ಮನೆ ಮನೆ ತಲುಪಿವೆ. ಡಿ ಸುಧಾಕರ ಹೆಳಿಕೆ..!

ಮೊಳಕಾಲ್ಮುರು : ಸಿದ್ದರಾಮಯ್ಯನವರ ಪಂಚ ಗ್ಯಾರಂಟಿ ಯೋಜನೆಗಳು ಸರ್ಕಾರ ಬಂದು ಕೇವಲ ಒಂದೇ ತಿಂಗಳಲ್ಲಿ ಮತದಾರರ ಮನೆಗೆ ತಲುಪುವಲ್ಲಿ ಯಶಸ್ವಿಯಾಗಿದ್ದೇವೆ. ಡಿ ಸುಧಾಕರ

ನಮ್ಮ ನಡೆ ಕಾರ್ಯಕರ್ತರ ಕಡೆ ಎನ್ನುವ ವಿನೋತನ ವಿಭಿನ್ನವಾಗಿ ಕಾರ್ಯಕ್ರಮ ದಿಂದ ಕಾರ್ಯಕರ್ತರಲ್ಲಿ ಚೈತನ್ಯ ತುಂಬುವ ಕೆಲಸ ಆಗಿದೆ ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು ಡಿ ಸುಧಾಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತಾಲ್ಲೂಕಿನ ದೇವಸಮುದ್ರ ಗ್ರಾಮದ ಪರಮೇಶ್ವರ ತಾತಾ ಮಠದಲ್ಲಿ ಮಂಗಳವಾರ ಕಾಂಗ್ರೇಸ್ ಪಕ್ಷದಿಂದ ಆಯೋಜಿಸಿದ್ದ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಎನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಿ ತಿಳಿಸಿದರು
ಮಾನ್ಯ ಸಿದ್ದರಾಮಯ್ಯನವರ ಪಂಚ ಗ್ಯಾರಂಟಿ ಯೋಜನೆಗಳು ಒಂದೇ ತಿಂಗಳಲ್ಲಿ ಜನರ ಮನೆ ಬಾಗಿಲಿಗೆ ತಲುಪಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಎಂದು ಹೇಳಿದರು ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ,ಮುಂದೆ ಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ಈ ಎರಡು ವರ್ಷಗಳಲ್ಲಿ ಕಾರ್ಯಕರ್ತರಿಗೆ ತೊಂದರೆ ಆಗಿರಬಹುದು ಆದರೆ ಮುಂದಿನ ದಿನಗಳಲ್ಲಿ ತೊಂದರೆ ಆಗದೆ ರೀತಿಯಲ್ಲಿ ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಮತ್ತು ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಹೆಚ್ಚು ಗಮನ ಕೊಡುತ್ತದೆ ಎಂದರು.

ಮೊಳಕಾಲ್ಮುರು ವಿಧಾನ ಸಭೆ ಕ್ಷೇತ್ರದ ಶಾಸಕ ಎನ್ ವೈ ಗೋಪಾಲ ಕೃಷ್ಣ ಮಾತನಾಡಿ ಸರ್ಕಾರ ನೀಡಿದ ಪಂಚ ಯೋಜನೆಗಳಿಂದ ಸಾಕಷ್ಟು ಬಡ ಜನರಿಗೆ ಸಹಕಾರಿಯಾಗಿದೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ಬರುವ ಅನುದಾನ ಸಾಲದು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊಡುತ್ತಾರೆ ಎನ್ನುವ ಭರವಸೆ ನೀಡಿದರು ಕಾಂಗ್ರೇಸ್ ಸರ್ಕಾರ ನೀಡಿದ ಗ್ಯಾರಂಟಿಯನ್ನು ಕಾರ್ಯಕರ್ತರು ಜನರಿಗೆ ಅರ್ಥ ಮಾಡಿಸುವ ಕೆಲಸ ಮಾಡಬೇಕು. ಮಾನ್ಯ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ಮುಂದೆ ಉತ್ತಮ ಕೆಲಸ ಮಾಡುತ್ತೀವೆ.ತುಂಗಭದ್ರಾ ಹಿಂನ್ನೀರು ಯೋಜನೆ ಯಿಂದ ಅಕ್ಟೋಬರ್ ತಿಂಗಳಲ್ಲಿ ನೀರು ತರುವ ಕೆಲಸ ಮಾಡುತ್ತೇವೆ. ಸರ್ಕಾರ ಮಾಡಿದ ಪಂಚ ಗ್ಯಾರಂಟಿ ಈ ಯೋಜನೆಗಳಿಂದ ಮುಂದಿನ ದಿನಗಳಲ್ಲಿ ಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆ ಗೆಲ್ಲುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಅದೇ ರೀತಿ ತಾಜ್ ಪೀರ್ ಬ್ಲಾಕ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರು ಮಾತನಾಡಿ ಕಾರ್ಯಕರ್ತರು ಇದ್ದರೆ ಮಾತ್ರ ಸರ್ಕಾರ ರಚನೆ ಮಾಡಲು ಸಾಧ್ಯ ಆಗಾಗಿ ನಾವುಗಳು ಮಾಡುವ ಕೆಲಸಗಳು ಹಾಗೂ ಕಾರ್ಯಕರ್ತರ ಕಷ್ಟ ನಷ್ಟಗಳನ್ನು ನಾವು ನೋಡಿ ಕೊಂಡಲ್ಲಿ ಅಭಿವೃದ್ಧಿ ಸಾಧ್ಯ. ಒಬ್ಬ ಧೀಮಂತ ನಾಯಕ ನಿಜಲಿಂಗಪ್ಪ ರವರನ್ನು ಮುಖ್ಯ ಮಂತ್ರಿ ಮಾಡಿದ ಕ್ಷೇತ್ರ ಮೊಳಕಾಲ್ಮುರು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಭಿವೃದ್ಧಿ ಮಾಡುವ ಕೆಲಸ ನಾವು ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದ್ರಾಕ್ಷಾ ರಸ ಮತ್ತು ವೈನ್ ಮಂಡಳಿಯ ಅಧ್ಯಕ್ಷ ಡಾ ಯೋಗೇಶ್ ಬಾಬು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಅದೇ ರೀತಿ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕಲೀಮ್ ಉಲ್ಲಾ, ನಾಗೇಶ್ ರೆಡ್ಡಿ, ಜಯಮ್ಮ ಬಾಲರಾಜ್ ಮಾಜಿ ವಿಧಾನ ಪರಿಷತ್ ಸದಸ್ಯರು, ಮಹಿಳಾ ಘಟಕದ ಅಧ್ಯಕ್ಷರು ಪ್ರೇಮ ಸುಧಾ,ಅಬ್ದುಲ್ ಸುಭಾನ್, ಮಹಮದ್ ಭಾರತ್ ಗ್ಯಾಸ್ ಮಾಲೀಕರು ಗುತ್ತಿಗೆದಾರರಾದ ಎಸ್ ಖಾಧರ್ , ತಿಪ್ಪೇಸ್ವಾಮಿ, ಶಿವಣ್ಣ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು, ಎನ್ ವೈ ಚೇತನ್ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು, ಪಟೇಲ್ ಜಿ ಪಾಪನಾಯಕ ಗುರುರಾಜ ನಾಯಕ ಕುಮರ ಗೌಡ, ಡಿ ಕೆ ಮಂಜುನಾಥ್, ಪ್ರಭು ಸ್ವಾಮಿ, ಸಿದ್ದಬಸಣ್ಣ ಆರ್ ಎಂ ಅಶೋಕ, ತಿಪ್ಪೇಸ್ವಾಮಿ ಕೊಂಡ್ಲಹಳ್ಳಿ ಗೋವಿಂದಪ್ಪ ಗುತ್ತಿಗೆದಾರರು ಜಿ ಪ್ರಕಾಶ್ ಮಾಜಿ ಪಪ ಅಧ್ಯಕ್ಷರು, ಅಬ್ದುಲ್ ವಕೀಲರು ಶಮಿವುಲ್ಲಾ, ಪಿ ಗೋಪಾಲ್ ಹೆಜ್ಜನ್ನಳ್ಳಿ ನಾಗರಾಜ್ ಬಿಟಿ ನಾಗಭೂಷಣ್ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ : ಚಂದ್ರಪ್ರಕಾಶ ಮೊಳಕಾಲ್ಮೂರು

Leave a Reply

Your email address will not be published. Required fields are marked *